Posts

Showing posts from May, 2020

ಅಮಾನತು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ

ಅಮಾನತು ವಾಪಾಸ್ ಪಡೆಯದಿದ್ದರೆ ಉಗ್ರ ಹೋರಾಟ! ಕೊರೋನ ವಾರಿಯರ್ಸ್ ರನ್ನ  ವಜಾಗೊಳಿಸಿದ ಬೆನ್ನಲ್ಲೆ ಶುಶ್ರೂಷ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿ ಸಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪನವರನ್ನ ಭೇಟಿ ಮಾಡಿ ಅಮಾನತು ವಾಪಾಸ್ ಪಡೆದುಕೊಳ್ಳುವಂತೆ ಮನವಿ ಸಲ್ಲಿಸಿತು. ಕೊರೋನ ವಾರಿಯರ್ಸ್ ಗಳಾದ ಖಾಯಂ ನೌಕರರಾದ ಚೇತನಾ ಕುಮಾರಿ, ಹೊರಗುತ್ತಿಗೆ ನೌಕರರಾದ ಭುವನೇಶ್ವರಿ, ಪದ್ಮರಾಜ್, ಅರುಣ್ ಕುಮಾರ್ ಲಕ್ಷ್ಮೀ ದೇವಿ, ಅನಿತಾರವರನ್ನ ಅಮಾನತು ಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಅಮಾನತುಗೊಳಿಸಲಾಗಿದ್ದು ಸಂಜೆಯಷ್ಟು ಹೊತ್ತಿಗೆ ಶುಶ್ರೂಷ ಸಂಘ ಅಮಾನತುಗೊಳಿಸಿದನ್ನ ವಿರೋಧಿಸಿ ಸಿಮ್ಸ್ ನಿರ್ದೇಶಕರನ್ನ ಮನವಿ ಸಲ್ಲಿಸಿದೆ. ಈ ಕುರಿತು ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ, ಈ ಅಮಾನತು ಸರಿಯಲ್ಲ, ವಾಪಾಸ್ ಪಡೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ಕೆಲಸದ ಒತ್ತಡದಿಂದ ಆಗಿರಬಹುದು ಎಂದು ಹೇಳಿದರು. ಕೊರೋನ ವಿರುದ್ಧ ಬಂದ ಮೊದಲ ಪ್ರಕರಣ ಇದು ಆಗಿದ್ದರಿಂದ ಗೌನು, ಮಾಸ್ಕ್ ಮೊದಲಾದ ಎಕ್ಯುಪ್ ಮೆಂಟ್ ಗಳನ್ನ ಹೊತ್ತು ಸತತ 6 ಗಂಟೆಯ ವರೆಗೆ ರೋಗಿಗಳನ್ನ ನೋಡಿಕೊಳ್ಳಬೇಕು ಇದು ಅವರಲ್ಲಿ ಕಿರಿಕಿರಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಅಚಾತುರ್ಯವಾಗಿರಬಹುದು. ಇದಕ್ಕೆ ಅಮಾನತು ಶಿಕ್ಷೆ ನೀಡುವುದು ಸರಿಯಲ್ಲವೆಂದರು..  ನಂತರ ಮಾತನಾಡಿದ ಶುಶ್ರೂಷಕಿ ಗಾಯಿತ್ರಿ...

ಗೋವು ಕಳ್ಳರ ಅಟ್ಟಹಾಸ ಶಿವಮೊಗ್ಗದಲ್ಲಿ

Image
ಶಿವಮೊಗ್ಗ ಸಮೀಪ ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗ ರಸ್ತೆಯಲ್ಲಿ ಮೇ 12 ರ ಮಂಗಳವಾರ ಮಧ್ಯರಾತ್ರಿ ಎರಡು ಗಂಟೆಗೆ ಗೋವು ಕಳ್ಳರು ಆಕಾಳಿಗೆ ಪ್ರಜ್ಞೆ ತಪ್ಪಿಸುವ ಬ್ರೆಡ್ ನ್ನು ತಿನ್ನಿಸಿ ಕಾರಿನಲ್ಲಿ ಹತ್ತಿಸಿಕೊಳ್ಳಲು ಹೋಗಿ ಪ್ರಯತ್ನ ವಿಫಲವಾಗಿದೆ . ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಿ ಶ್ವೇತಾ ಮಂಜುನಾಥ್