Posts

Showing posts from April, 2020

ಪೋಲಿಸರು ಭೇದಿಸಿದ ,ಅಂಬ್ಯೂಲೆನ್ಸ ರಹಸ್ಯ

Image
*ಸೆಕ್ಷನ್ 144Crpc ನಿಯಮ ಉಲ್ಲಂಘನೆ ಮಾಡಿ  ಅಂಬ್ಯೂಲೆನ್ಸ್ ನಲ್ಲಿ  ಬೆಂಗಳೂರಿನಿಂದ ಪ್ರಯಾಣಿಕರನ್ನು ಶಿವಮೊಗ್ಗದ ಕಡೇಕಲ್ ಗ್ರಾಮಕ್ಕೆ ಕರೆತಂದ ವ್ಯಕ್ತಿಯ ವಿರುದ್ಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ*             ದೇಶಾದ್ಯಂತ Covid-19 ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ *ಭಾರತ ದೇಶಾದ್ಯಂತ ಲಾಕ್ ಡೌನ್* ಘೋಷಣೆಯಾಗಿದ್ದು ಹಾಗೂ *ಶಿವಮೊಗ್ಗ ಜಿಲ್ಲಾಧಿಕಾರಿಗಳು  ಸೆಕ್ಷನ್ 144 Crpc ಯನ್ನು* ಜಾರಿ ಮಾಡಿ  ಆದೇಶ ಹೊರಡಿಸಿದ್ದು, ಹೊರ ಜಿಲ್ಲೆಯಿಂದ  ಸಾರ್ವಜನಿಕರನ್ನು ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಮಾಡಲು ನಿರ್ಭಂದ ವಿಧಿಸಿದ್ದರೂ ಸಹಾ ದಿಃ-25.03.2020 ರಂದು ನಂಬರ್ KA-14 B-1680  ಆಂಬ್ಯೂಲೆನ್ಸ್  ಚಾಲಕನಾದ *ಸಯ್ಯದ್ ಖಾಸಿಂ ಬಿನ್ ಸೈಯದ್ ಅಕ್ಬರ್ ವಾಸ ಅನ್ವರ್ ಕಾಲೋನಿ ಭದ್ರಾವತಿ* ಈತನು ತನ್ನ ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗದ ಕಡೇಕಲ್ ಗ್ರಾಮದ ವಾಸಿಗಳಾದ  05 ಜನರನ್ನು ಸ್ವ ಗ್ರಾಮಕ್ಕೆ  ಕರೆತಂದು ಬಿಟ್ಟಿರುತ್ತಾನೆ.                ಮಾರಣಾಂತಿಕವಾದ Covid-19 ವೈರಾಣುವು ಇತರರಿಗೂ ಸಹಾ ಹರಡುವ ಸಾದ್ಯತೆಗಳಿದ್ದರೂ ಲಾಕ್ ಡೌನ್ ಹಾಗೂ ಸೆಕ್ಷನ್ 144Crpc ನಿಯಮವನ್ನು  ಉಲ್ಲಂಘನೆ ಮಾಡಿ  ಅಂಬ್ಯೂಲೆನ್ಸ್ ...

ವಾಟ್ಸಪ್ ಮೆಸೇಜ್ಗೆ ಸ್ಪಂದಿಸಿದ ಶಿವಮೊಗ್ಗ ಪೊಲೀಸರು

Image
ವಾಟ್ಸಪ್‌ ಮೆಸೇಜ್‌ಗೆ ಸ್ಪಂದಿಸಿದ‍ ಶಿವಮೊಗ್ಗ ಪೊಲೀಸರು ವೃದ್ಧ ದಂಪತಿಗೆ ನೆರವು ನೀಡಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿ ಮತ್ತು ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಶಿವಮೊಗ್ಗ ಮಲವಗೊಪ್ಪದ ಶುಗರ್‌ ಫ್ಯಾಕ್ಟರಿ ಕ್ವಾರ್ಟರ್ಸ್‌ನಲ್ಲಿ ದಂಪತಿ ವಾಸವಾಗಿದ್ದಾರೆ. ಸಂಬಂಧಿಯೊಬ್ಬರು ತೀರಿಕೊಂಡಿರುವ ಹಿನ್ನೆಲೆ, ಕುಟುಂಬದವರು ತಮಿಳುನಾಡಿಗೆ ಹೋಗಿದ್ದು, ಲಾಕ್‌ಡೌನ್‌ ಹಿನ್ನೆಲೆ ಹಿಂತಿರುಗಲು ಆಗಿಲ್ಲ. ಇತ್ತ ವೃದ್ಧ ದಂಪತಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಾದ್ಯವಾಗಿಲ್ಲ. ವಾಟ್ಸಪ್‌ ಮೆಸೇಜ್‌ಗೆ ಸ್ಪಂದಿಸಿದ ಪೊಲೀಸ್  ..... ವೃದ್ಧ ದಂಪತಿ ಪರಿಸ್ಥಿತಿ ಕುರಿತು ವಾಟ್ಸಪ್‌ನಲ್ಲಿ ಮೆಸೇಜ್‌ ಬಂದಿತ್ತು. ಇದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ವೃದ್ಧ ದಂಪತಿಗೆ ನೆರವು ನೀಡುವಂತೆ ಸೂಚಿಸಿದ್ದರು. ಅದರಂತೆ ದಂಪತಿ ಮನೆಗೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್‌ಐ ಸುರೇಶ್‌ ಮತ್ತು ಸಿಬ್ಬಂದಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ                                                      ಶಿವಮೊಗ್ಗ ಜಿಲ್ಲಾ ಸಹ...

ಲಾಕ್ ಡೌನ್ ಸಂದರ್ಭದಲ್ಲಿಯೂ ಉಚಿತ ಪೆಟ್ರೋಲ್ ಗೆ. ನೂಕುನುಗ್ಗಲು ಶಿವಮೊಗ್ಗದಲ್ಲಿ ಎಷ್ಟು ಲೀಟರ್ ಫ್ರೀ? ಯಾರಿಗೆಲ್ಲ ಇತ್ತು ಆಫರ್ ?

Image
ಲಾಕ್‌ಡೌನ್‌ ಹಿನ್ನೆಲೆ ಪೆಟ್ರೋಲ್‌ ಸಿಗುವುದೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಶಿವಮೊಗ್ಗದ ಪೆಟ್ರೋಲ್‌ ಬಂಕ್‌ ಒಂದರ ಮಾಲೀಕರು ಪ್ರತಿ ಗಾಡಿಗೆ ಒಂದು ಲೀಟರ್‌ ಪೆಟ್ರೋಲ್‌ ಉಚಿತ ಎಂಬ ಆಫರ್‌ ನೀಡಿದ್ದಾರೆ. ಇದು ಒಂದು ದಿನದ ಆಫರ್.‌ ಹಾಗಾಗಿ ಇವತ್ತು ಆ ಪೆಟ್ರೋಲ್‌ ಬಂಕ್‌ ಮುಂದೆ ಜನ ಸಾಗರವೇ ಸೇರಿತ್ತು. ಯಾರಿಗೆಲ್ಲ ಇತ್ತು ಆಫರ್...... ಕರೋನ ವಿರುದ್ಧ ಶಿವಮೊಗ್ಗದಲ್ಲಿ ಹೋರಾಡುತ್ತಿರುವವರಿಗೆ ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ನಲ್ಲಿ ಆಫರ್‌ ನೀಡಲಾಗಿತ್ತು. ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ಈ ಆಫರ್‌ ಅನ್ವಯವಾಗಿತ್ತು. ಒಂದು ದಿನದ ಆಫರ್‌ ಈ ದಿನ ಮಧ್ಯಾಹ್ನಕ್ಕೆ ಮುಗಿದಿದೆ.  ಆಫರ್‌ ಕೊಟ್ಟಿದ್ದು ಏಕೆ..... ಕರೋನ ವಿರುದ್ಧ ಹೋರಾಡುವವರಿಗೆ ಹುರಿದುಂಬಿಸುವ ಸಲುವಾಗಿ ಇಂತಹ ಆಫ್‌ ನೀಡಲಾಗಿದೆ. ಈಗ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರಿಗೆ ಉಚಿತ ಪೆಟ್ರೋಲ್‌ ಹಾಕಲಾಗುತ್ತಿದೆ. ಇದೇ ರೀತಿ ಕರೋನ ವಿರುದ್ಧ ಹೋರಾಟ ನಡೆಸುತ್ತಿರುವ ಇನ್ನಷ್ಟು ಜನರಿಗೆ ಈ ಆಫರ್‌ ನೀಡಲಾಗುತ್ತದೆ ಎಂದು ಸಹ್ಯಾದ್ರಿ ಪೆಟ್ರೋಲ್‌ ಬಂಕ್‌ ಮಾಲೀಕ ಸುಹಾಸ್‌ ತಿಳಿಸಿದ್ದಾರೆ. ಸಾಮಾಜಿಕ ಅಂತರಕ್ಕಿಲ್ಲ ಕವಡೆ ಕಿಮ್ಮತ್ತು ಉಚಿತ ಪೆಟ್ರೋಲ್‌ ಆಫರ್‌ ಇದ್ದಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರತಿದಿನ ಸಾಮಾಜಿಕ ಅಂತರದ ಪಾಠ ಮಾಡುತ್ತಿದ್ದವರೆ ಅಂತರವಿರಲ್ಲ...

ಯಾರೂ ಮನೆ ಬಿಟ್ಟು ಹೊರ ಬರುತ್ತಿಲ್ಲ ಆದರೂ ನಡೀತಿದೆ ಎಲ್ಲ ಕ್ಲಾಸ್ ಶಿವಮೊಗ್ಗ ಜೆಎನ್ಎನ್ ಕಾಲೇಜು ಡಿಫರೆಂಟ್ ಪ್ರಯೋಗ ಏನದು

Image
ಯಾರೂ ಮನೆ ಬಿಟ್ಟು ಹೊರ ಬರುತ್ತಿಲ್ಲ, ಆದರೂ ನಡೀತಿದೆ ಎಲ್ಲ ಕ್ಲಾಸ್, ಶಿವಮೊಗ್ಗ JNN ಕಾಲೇಜು ಡಿಫರೆಂಟ್ ಪ್ರಯೋಗ, ಹೇಗದು? ಕರೊನಾ ಹಿನ್ನೆಲೆಯಲ್ಲಿ ಹಲವಾರು ಬದಲಾವಣೆಯಾಗಿದೆ. ವರ್ಕ್ ಫ್ರಂ ಹೋಂ ಹಾಗೂ ಆನ್‌ಲೈನ್‌ನ ವ್ಯವಹಾರಗಳಿಗೆ ಇನ್ನಿಲ್ಲದ ಮಹತ್ವ ಬಂದಿರುವುದು ಕರೊನಾದಿಂದ ಎಂದರೆ ಉತ್ಪ್ರೇಕ್ಷೆಯಲ್ಲ. ಈಗ ಇದೇ ಕರೊನಾ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೂ ಕಾರಣವಾಗಿದೆ. ಶಿವಮೊಗ್ಗ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಆನ್‌ಲೈನ್ ಮೂಲಕವೇ ತಮ್ಮ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದಾರೆ. ಆ ಮೂಲಕ ಸಮಯ ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರ ಆತಂಕ ದೂರ ಮಾಡುವ ಪ್ರಯತ್ನದಲ್ಲಿದ್ದಾರೆ. ಆ್ಯಪ್ ಮೂಲಕವೆ ಕ್ಲಾಸ್ ಆನ್‌ಲೈನ್‌ನಲ್ಲಿ ಲಭ್ಯವಿರುವ ಜೂಮ್ ಆ್ಯಪ್ ಮೂಲಕ ಎಂಬಿಎ, ಎಂಸಿಎ ಹಾಗೂ ಎಂಟೆಕ್ ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಪನ್ಯಾಕಸರು ತಮ್ಮ ಮನೆಗಳಿಂದಲೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಕಾಲೇಜಿನ ದೈನಂದಿನ ವೇಳಾಪಟ್ಟಿಯಂತೆ ತರಗತಿಗಳನ್ನು ನಡೆಸಲಾಗುತ್ತಿದೆ.  ಆನ್’ಲೈನ್’ನಲ್ಲೇ ವಿದ್ಯಾರ್ಥಿಗಳ ಹಾಜರಾತಿ ಈ ಆ್ಯಪ್ ಮೂಲಕವೇ ವಿದ್ಯಾರ್ಥಿಗಳ ಹಾಜರಾತಿಗಳನ್ನು ದಾಖಲಿಸಿಕೊಳ್ಳುವುದು, ಅಸೈನ್‌ಮೆಂಟ್‌ಗಳನ್ನು ಸ್ವೀಕರಿಸುವುದು, ಗುಂಪು ಚರ್ಚೆ, ಮುಕ್ತ ಸಂವಾದ ಮುಂತಾದ ಶಿಕ್ಷ...

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

Image
ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚು, ಕಾರಣವೇನು? ಈವರೆಗೆ ಎಷ್ಟು ಪಾಸಿಟಿವ್ ಬಂದಿದೆ? ಜಗತ್ತಿನಾದ್ಯಂತ ಕರೋನ ಆತಂಕವಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ತೀರ್ಥಹಳ್ಳಿ, ಸಾಗರ ತಾಲೂಕಿನ ವಿವಿಧೆಡೆ ಮಂಗನ ಕಾಯಿಲೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಕಡೆಗೆ ಜನರು ಕಾಡಿಗೆ ಹೋಗುವುದನ್ನೆ ನಿರ್ಬಂಧಿಸಲಾಗಿದೆ. ತೀರ್ಥಹಳ್ಳಿಯಲ್ಲಿ 111 ಸೋಂಕಿತರು ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಕೆಎಫ್’ಡಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ. ಇನ್ನು ಸಾಗರದಲ್ಲಿ 27 ಮತ್ತು ಹೊಸನಗರ ತಾಲೂಕಿನಲ್ಲಿ ಒಬ್ಬರು ಸೋಂಕು ತಗುಲಿದೆ. ಕೆಎಫ್’ಡಿಗೆ ಐವರು ಸಾವು ಮಂಗನ ಕಾಯಿಲೆಗೆ ಈ ವರ್ಷ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನಲ್ಲಿ ಐವರು ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಬೆಟ್ಟಬಸವಾನಿ, ಕೋಣಂದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಸಾಗರದ  ತುಮರಿ ಮತ್ತು ಅರಳಗೋಡು ಪಿಹೆಚ್’ಸಿ ವ್ಯಾಪ್ತಿಯಲ್ಲಿ ತಲಾ ಒಬ್ಬರು ಕೆಎಫ್’ಡಿಗೆ ಅಸುನೀಗಿದ್ದಾರೆ. ದಯವಿಟ್ಟು ಕಾಡಿಗೆ ಹೋಗಬೇಡಿ ಕೆಎಫ್’ಡಿ ಹರಡುವ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ 31 ಪ್ರದೇಶಗಳನ್ನು ಸೂಕ್ಷ್ಮ ಪ್ರದ...

ಶಿವಮೊಗ್ಗ ಜಿಲ್ಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ,ವಸತಿ ,ಆಹಾರ ಹಲ್ಪ್'ಲೈ‌ನ್ ಆರಂಭ,ಪೋನ್ ಮಾಡಿದ ತಕ್ಷಣ ಸಿಗುತ್ತದೆ ನೆರವು ನೀಡದಿದ್ದಾರೆ

Image
ಕರೋನ ಲಾಕ್’ಡೌನ್ ಹಿನ್ನೆಲೆ ಊಟ, ವಸತಿಗಾಗಿ ಸಂಕಷ್ಟ ಅನುಭವಿಸುತ್ತಿರುವವರ ನೆರವಿಗೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆಂದು ‘ಹಂಗರ್ ಹೆಲ್ಪ್’ಲೈನ್’ ಆರಂಭಿಸಿದೆ. ತುರ್ತು ವೈದ್ಯಕೀಯ ಅವಶ್ಯಕತೆ ಇರುವವರಿಗಾಗಿ ಮೆಡಿಕಲ್ ಹೆಲ್ಪ್’ಲೈನ್ ಕೂಡ ಆರಂಭಿಸಲಾಗಿದೆ. ಈ ಹೆಲ್ಪ್’ಲೈನ್’ಗೆ ಕರೆ ಮಾಡಿದರೆ ಅಧಿಕಾರಿಗಳು ತುರ್ತಾಗಿ ನೆರವು ನೀಡಲಿದ್ದಾರೆ. ತುರ್ತು ವೈದ್ಯಕೀಯ ನೆರವು ಬೇಕಿದ್ದರೆ ಈ ನಂಬರ್’ಗಳು ಡಿಸಿ ಕಚೇರಿ 08182 221010, 221077 ಮೆಗ್ಗಾನ್ ಆಸ್ಪತ್ರೆ 08182 269900 ಶಿವಮೊಗ್ಗ ನಗರ ಪಾಲಿಕೆ 18004257677 ಶಿವಮೊಗ್ಗ 08182 279311 ಭದ್ರಾವತಿ 08282 263466 ತೀರ್ಥಹಳ್ಳಿ 08181 228239 ಶಿಕಾರಿಪುರ 08187 222422 ಸಾಗರ 08183 226074 ಸೊರಬ 08184  272241 ಹೊಸನಗರ 08185 221235 ಊಟ, ವಸತಿ ಸಂಕಷ್ಟ ಅನುಭವಿಸುತ್ತಿದ್ದರೆ ಈ ನಂಬರ್’ಗಳು ಶಿವಮೊಗ್ಗ 8970764797 ಭದ್ರಾವತಿ 6362405331 ತೀರ್ಥಹಳ್ಳಿ 9480319533 ಸಾಗರ 9481989026 ಶಿಕಾರಿಪುರ 7899961180 ಸೊರಬ 9741840452 ಹೊಸನಗರ 9731853178 ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಹೆಲ್ಪ್’ಲೈನ್ ನಂಬರ್’ಗಳು ಶಿವಮೊಗ್ಗ ಪಾಲಿಕೆ 18004257677 ಭದ್ರಾವತಿ 08282 266356 ಸಾಗರ 08183 226074 ಶಿಕಾರಿಪು 08187 222771 ಶಿರಾಳಕೊಪ್ಪ 8123371319 ಹೊಸನಗರ 08185 221005 ತೀರ್ಥಹಳ್ಳಿ 08181 ...

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ

Image
‍ ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ ಶಿವಮೊಗ್ಗ, ಎಪ್ರಿಲ್-05(ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಣೆ ಮಾಡಲಾಗುತ್ತಿದ್ದು, ಈ ಕುರಿತು ಯಾವುದೇ ದೂರುಗಳಿದ್ದರೆ ಗ್ರಾಹಕರು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಿ ದೂರುಗಳನ್ನು ದಾಖಲಿಸಬಹುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ 10ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡಿಗೆ ಎರಡು ತಿಂಗಳ ಅವಧಿಯ 4ಕೆಜಿ ಗೋಧಿಯನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಕಾರ್ಡುದಾರರಿಗೆ ಒಟ್ಟು ಪ್ರತಿ ಕಾರ್ಡಿಗೆ 70 ಕೆಜಿ ಅಕ್ಕಿ ನೀಡಲಾಗುತ್ತಿದೆ. ಎಪಿಎಲ್ ಏಕಸದಸ್ಯ ಕಾರ್ಡಿಗೆ 10ಕೆಜಿ ಅಕ್ಕಿ, 2ಹಾಗೂ ಹೆಚ್ಚಿನ ಸದಸ್ಯರಿರುವ ಕಾರ್ಡಿಗೆ 20 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ದೂರು ದಾಖಲಿಸಿ: ತೂಕದಲ್ಲಿ ಮೋಸ, ಅಸಮರ್ಪಕ ಸೇವೆ ಸೇರಿದಂತೆ ಯಾವುದೇ ಕುರಿತು ದೂರುಗಳಿದ್ದರೆ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ಶಿವಮೊಗ್ಗ ನಗರ: 82176-93001 (ಸಹಾಯಕ ನಿರ್ದೇಶಕರು), 86186-46252(ಆಹಾರ ನಿರೀಕ್ಷಕರು), ಭದ್ರಾವತಿ ನಗರ: 94487-41918, 97430-56548,  ಶಿವಮೊಗ್ಗ ತ...

ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಬೇಜವಾಬ್ದಾರಿ ತನ

Image
ತೀರ್ಥಹಳ್ಳಿ : ತಾಲೂಕಿನ ಮೇಲಿನಕುರುವಳ್ಳಿ ಯಲ್ಲಿ ಮಂಡಲ್ ಪಂಚಾಯಿತಿ ಸದ್ಯಸರ ಬೇಜವಾಬ್ದಾರಿತನ. ಕೆಲಸಕ್ಕೆ ಇಬ್ಬರು ಹೆಣ್ಣುಮಕ್ಕಳನ್ನ ಹಾಕಿಕೊಂಡು ರೇಷನ್ ಅನ್ನು ಗಂಟೆ ಗಟ್ಟಲೆ ಕಾಲ ಜನರನ್ನು ಕಾಯಿಸುತ್ತಿದ್ದರೆ. ಎಲೆಕ್ಷನ್ ಸಮಯದಲ್ಲಿ  ಗೆದ್ದಿರುವ ಒಬ್ಬರೇ ಒಬ್ಬ ಸದಸ್ಯರು ಇಲ್ಲ. ಪೋಲೀಸರ ಎದುರೇ ಗಲಾಟೆ ಮಾಡುತ್ತಿದ್ದು ಈ ಸಂಬಂಧ ತೀರ್ಥಹಳ್ಳಿ ತಹಶೀಲ್ದಾರ್ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಸಹ ಸಂಪಾದಕರು ಶಿವಮೊಗ್ಗ ಜಿಲ್ಲೆ ಮಂಜುನಾಥ್ 

ಬಡವರ ಅಕ್ಕಿ ಕದ್ದವರ ಮೇಲೆ ದಾಳಿ ,ಎಷ್ಟು ಮೂಟೆ ಅಕ್ಕಿ ಸಿಕ್ತು ? ಶಿವಮೊಗ್ಗದಲ್ಲಿ ಮುಚ್ಚಿಟ್ಟಿದ್ದು ಹೇಗೆ ಗೊತ್ತಾ?

Image
ಲಾಕ್’ಡೌನ್ ವೇಳೆ ನಕಲಿ ಪಾಸ್ ಬಳಸಿಕೊಂಡು ಕಳ್ಳದಂಧೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಾಹನಗಳ ಮೇಲೆ ನಕಲಿ ಪಾಸ್ ಅಂಟಿಸಿಕೊಂಡು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಟೆಗಟ್ಟಲೆ ಅಕ್ಕಿ ವಶಕ್ಕೆ ಶಿವಮೊಗ್ಗದ ಕಲ್ಲೂರು ಮಂಡ್ಲಿಯ ಗೋಡೋನ್ ಮೇಲೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅನ್ನಭಾಗ್ಯ ಯೋಜನೆಯ ಸುಮಾರು 300 ಚೀಲ ಅಕ್ಕಿ ಪತ್ತೆಯಾಗಿದೆ. ಎರಡು ಕಡೆ ಅಕ್ಕಿಯನ್ನು ಇರಿಸಿರುವುದು ಪತ್ತೆಯಾಗಿದೆ.  ನಕಲಿ ಪಾಸ್ ಅಂಟಿಸಿಕೊಂಡಿದ್ದ ಖದೀಮರು ಲಾಕ್’ಡೌನ್ ವೇಳೆ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ಹೆಚ್ಚಿದೆ. ಈ ಹಿನ್ನೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಿಸಲು ಸುಲಭವಾಗಲಿ ಅಂತಾ ನಕಲಿ ಪಾಸ್’ಗಳನ್ನು ಬಳಸಿಕೊಳ್ಳಲಾಗಿತ್ತು. ಲಾರಿ, ಗೂಡ್ಸ್ ವಾಹನಗಳ ಮೇಲೆ ಎಸೆನ್ಷಿಯಲ್ ಸರ್ವಿಸ್ ಎಂದು ಪಾಸ್ ಅಂಟಿಸಿಕೊಂಡು, ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.   ಬ್ರಾಂಡ್’ನಲ್ಲಿ ಅಕ್ಕಿ ಮಾರಾಟ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬೇರೆ ಬ್ರಾಂಡ್’ನಲ್ಲಿ ಮಾರಾಟ ಮಾಡುತ್ತಿದ್ದರು ಅನ್ನುವುದು ದಾಳಿ ವೇಳೆ ತಿಳಿದು ಬಂದಿದೆ. ಇನ್ನು, ದಾಳಿ ವೇಳೆ ಸುಮಾರು 300 ಚೀಲ ಅನ್ನಭಾಗ್ಯ ಯೋಜನೆಯ ಅಕ್ಕಿ, ಒಂದು ಲಾರಿ, ಒಂ...

ಫೇಸ್' ಬುಕ್ .ವಾಟ್ಸಾಪ್ ನಲ್ಲಿ ವಿಡಿಯೋ. ಮೆಸೇಜ್ ಶೇರ್ ಮಾಡುವಾಗ ಹುಷಾರ್ ಗ್ರೂಪ್ ಅಡ್ಮಿನ್'ಗಳೇ ಎಚ್ಚರ ಎಚ್ಚರ ಎಚ್ಚರ

Image
ವಾಟ್ಸಪ್ , ಫೇಸ್’ಬುಕ್’ನಲ್ಲಿ ವಿಡಿಯೋ , ಮೆಸೇಜ್ ಷೇರ್ ಮಾಡುವಾಗ ಹುಷಾರ್ , ಗ್ರೂಪ್ ಅಡ್ಮಿನ್’ಗಳೇ ಎಚ್ಚರಿಕೆಯಿಂದಿರಿ ಲಾಕ್’ಡೌನ್ ಸಂದರ್ಭ ವಾಟ್ಸಪ್, ಫೇಸ್’ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡುವ ಮೆಸೇಜುಗಳನ್ನು ಫಾರ್ವರ್ಡ್ ಮಾಡುತ್ತಿದ್ದ ಇಬ್ಬರ ವಿರುದ್ಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಧರ್ಮೀಯರ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಕೋಮು ಪ್ರಚೋದನಕಾರಿ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡುವಂತಿಲ್ಲ. ಹೀಗೆ ಮಾಡಿ ಸಾಮಾಜಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗ್ರೂಪ್ ಅಡ್ಮಿನ್’ಗಳೇ ಎಚ್ಚರ ಇಂತಹ ಮೆಸೇಜುಗಳು ವಾಟ್ಸಪ್ ಗ್ರೂಪ್’ಗಳಲ್ಲಿ ಫಾರ್ವರ್ಡ್ ಮಾಡಿದರೆ ಗ್ರೂಪ್ ಅಡ್ಮಿನ್’ಗಳೇ ಹೊಣೆಗಾರರಾಗುತ್ತಾರೆ. ಅವರ ವಿರುದ್ಧವು ಕ್ರಮ ಕೈಗೊಳ್ಳಲಾಗುತ್ತದೆ ಎಂದು, ಫೇಸ್’ಬುಕ್’ನಲ್ಲಿ ವಿಡಿಯೋ, ಮೆಸೇಜ್ ಷೇರ್ ಮಾಡುವಾಗ ಹುಷಾರ್, ಗ್ರೂಪ್ ಅಡ್ಮಿನ್’ಗಳೇ ಎಚ್ಚರಿಕೆಯಿಂದಿರಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಸಂಪಾದಕಿ ಶ್ವೇತಾ ಮಂಜುನಾಥ್

ಮೆಗನ್ ಹೋದರೇನಂತೆ ಭರ್ಜರಿಯಾಗಿ ಸಿದ್ಧಗೊಂಡಿದೆ ಏಂಜಲ್ಸ್ ಹಾಗೂ ಸರ್ಜಿ ಆಸ್ಪತ್ರೆ ಗಳು

Image
ಮೆಗ್ಗಾನ್ ನಲ್ಲಿ ನಿನ್ನೆ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅನಾಹುತಕ್ಕೆ ಜಿಲ್ಲಾಡಳಿತ ಹೆರಿಗೆ ವ್ಯವಸ್ಥೆಯನ್ನ ಬೇರೆಡೆ ಮಾಡಿದೆ. ಸಾಮಾನ್ಯ ಹೆರಿಗೆ ಮಾತ್ರ ಮೆಗ್ಗಾನ್ ನಲ್ಲಿ ನೋಡಲಾಗುತ್ತಿದ್ದು,  ಸಾಮಾನ್ಯವಲ್ಲದ ಹೆರಿಗೆ ಪ್ರಕರಣಗಳನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತಿದೆ. ಅದರಂತೆ ಎರಡು ಖಾಸಗಿ ಆಸ್ಪತ್ರೆಗಳನ್ನ ಜಿಲ್ಲಾಡಳಿತ ಗುರುತಿಸಿದೆ. ಮೆಗ್ಗಾನ್ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ನಿನ್ನೆ ಶಾರ್ಟ್ ಸೆರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಟ್ಟುಹೋಗಿದೆ, ಮೆಗ್ಗಾನ್ ಬೆಂಕಿಗೆ ಆಹುತಿ ಆದರೆ ಏನಂತೆ ಖಾಸಗಿ ಆಸ್ಪತ್ರೆಗಳ ವೈದ್ಯರ ತಂಡ ಮಕ್ಕಳನ್ನ ಹಾಗೂ ತಾಯಿಯಂದರನ್ನ ರಕ್ಷಿಸಲು ಅಲ್ಲಿನ ವೈದ್ಯರು ಯುದ್ಧದ ರೀತಿಯಲ್ಲಿ ಸನ್ನದ್ಧರಾಗಿದ್ದಾರೆ. ಮೆಗ್ಗಾನ್ ಗೆ ಬರುವ ಮಹಿಳೆಯರಿಗೆ ಹೆರಿಗೆಯಲ್ಲಿ ತೊಂದರೆ ಕಂಡುಬಂದರೆ ಮ್ಯಾಕ್ಸ್ ಏಂಜಲ್ ಹಾಗೂ ಸರ್ಜಿ, ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಮ್ಯಾಕ್ಸ್ ಏಂಜಲ್ ನಲ್ಲಿ ಡಾ.ನಾಗೇಂದ್ರರವರ ನೇತೃತ್ವದಲ್ಲಿ ತಂಡ ಸಿದ್ದಗೊಂಡಿದೆ ಡಾ.ನಾಗೇಂದ್ರರವರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಮ್ಯಾಕ್ಸ್ ಏಂಜಲ್ ಆಸ್ಪತ್ರೆಯಲ್ಲಿ ಮೆಗ್ಗಾನ್ ಗೆ ಬಂದ ಎರಡು ಹೊಸ ಹೆರಿಗೆ ಪ್ರಕರಣವನ್ನ ಇಂದು ಅಡ್ಮಿಟ್ ಮಾಡಿಕೊಳ್ಳಲಾಗಿದೆ. ತರೀಕೆರೆ ನಿವಾಸಿ ಶಬನಾ ಹಾಗೂ ಭದ್ರಾವತಿ ನಿವಾಸಿ ಸಾನಿಯಾ ಫೈರೋಜ್ ರವರನ್ನ ದಾಖಲಿಸಿಕೊಳ್ಳಲಾಗಿದೆ.  ಆರೋಗ್ಯದಲ್ಲಿ ಏರುಪೇರು ಕ...

ಅಬಕಾರಿ ಇಲಾಖೆಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ,25 ಬಾಕ್ಸ್ ಮದ್ಯ ವಶಕ್ಕೆ, ಸೀಜ್ ಆಗಿದ್ದಲ್ಲಿ.?

Image
ಲಾಕ್’ಡೌನ್ ಸಂದರ್ಭ ವೈನ್ ಶಾಪ್ ಒಂದರಿಂದ ಮದ್ಯವನ್ನು ಬೇರೆಡೆ ಕೊಂಡೊಯ್ಯುತ್ತಿದ್ದ ವ್ಯಕ್ತಿ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರು, ಬಾಕ್ಸ್’ಗಟ್ಟಲೆ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಘಟನೆಯ ಸಂಭವಿಸಿದೆ. ಇಲ್ಲಿನ ವೈನ್ ಶಾಪ್ ಒಂದರಿಂದ ವ್ಯಕ್ತಿಯೊಬ್ಬರು 25 ಬಾಕ್ಸ್ ಮದ್ಯವನ್ನು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀಸರು, ಕಾರು ಮತ್ತು ಮದ್ಯವನ್ನು ಸೀಜ್ ಮಾಡಿದ್ದಾರೆ. ‘ದೇವರಾಜ್ ಎಂಬಾತ ಮದ್ಯವನ್ನು ಕೊಂಡೊಯ್ಯುವಾಗ ದಾಳಿ ನಡೆಸಲಾಗಿದೆ. ರಾತ್ರಿ ದಾಳಿ ವೇಳೆ ಆತ ಪರಾರಿಯಾಗಿದ್ದಾನೆ. ಆತನಿಮದ ವಶಕ್ಕೆ ಪಡೆದ ಮದ್ಯ ಮತ್ತು ಕಾರಿನ ಮೌಲ್ಯ 2.25 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಇನ್ಸ್’ಪೆಕ್ಟರ್ ಹನುಮಂತಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ’’ ಅಂತಾ ಅಬಕಾರಿ ಇಲಾಖೆ ಉಪ ಆಯುಕ್ತ  ಕ್ಯಾಪ್ಟನ್ ಅಜಿತ್ ಕುಮಾರ್ ತಿಳಿಸಿದ್ದಾರೆ. ಹಗಲು , ರಾತ್ರಿ ಕಾರ್ಯಾಚರಣೆ ಟೀಮ್  ಲಾಕ್’ಡೌನ್ ಹಿನ್ನೆಲೆ ಮದ್ಯ ಮಾರಾಟ ನಿಷೇಧವಿದೆ. ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಅಬಕಾರಿ ಇಲಾಖೆ ಇನ್ಸ್’ಪೆಕ್ಟರ್, ಸಬ್’ಇನ್ಸ್’ಪೆಕ್ಟರ್’ಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಹಗಲು, ರಾತ್ರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಉಪ ಆಯುಕ್ತ ಅಜಿತ್ ಕುಮಾರ್ ಸ್ಪಷ್ಟಪಡಿಸಿದರು. ಲಾಕ್’ಡಾನ್ ಆದ...

ಶಿವಮೊಗ್ಗ .ನವಲಿ ಚಾನೆಲ್ ಏರಿಯಾದ ಮಹಿಳೆಯರಿಂದ ಧಿಡೀರ್ ಪ್ರತಿಭಟನೆ ,ಕಾರ್ಪೋರೇಟರ್ ಜೊತೆ ವಾಗ್ವಾದ ,ಕಾರಣವೇನು

Image
ಕರೋನ ಲಾಕ್’ಡೌನ್ ಸಂದರ್ಭ ಸರ್ಕಾರ ಘೋಷಿಸಿದ ಯಾವುದೇ ಸೌಲಭ್ಯವು ತಮಗೆ ದೊರಕ್ಕಿಲ್ಲ ಅಂತಾ ಮಹಿಳೆಯರು, ಮಹಿಳು ಆಕ್ರೋಶ ವ್ಯಕ್ತಪಡಿಸಿ, ನಾವುಲೆ ಚಾನೆಲ್ ಏರಿ ಪಕ್ಕದ ರಸ್ತೆ ತಡೆ ನಡೆಸಿದರು. ಈ ವೇಳೆ ಮಹಾನಗರ ಪಾಲಿಕೆ ಕಾರ್ಪೊರೇಟರ್ ಜೊತೆಗೆ ಮಾತಿನ ಚಕಮಕಿಯನ್ನು ನಡೆಸಿದರು. ದಿಢೀರ್ ಪ್ರತಿಭಟನೆಗೆ ಕಾರಣವೇನು? ರಾಜ್ಯ ಸರ್ಕಾರದ ಆದೇಶದಂತೆ ಬಡವರು, ಸ್ಲಂ ನಿವಾಸಿಗಳಿಗೆ ಕಾರ್ಪೊರೇಟರ್ ಧೀರಾಜ್ ಹೊನ್ನವಿಲೆ ಹಾಲು ವಿತರಿಸುತ್ತಿದ್ದರು. ನವುಲೆ ಚಾನೆಲ್ ಏರಿ ಪಕ್ಕದ ರಸ್ತೆ ನಿವಾಸಿಗಳಿಗೆ ಹಾಲು ವಿತರಿಸಲು ಆಗಮಿಸಿದ ಸಂದರ್ಭ, ಮಹಿಳೆಯರು ಪಾಲಿಕೆ ಸದಸ್ಯ ಧೀರಾಜ್ ಹೊನ್ನವಿಲೆ ಜೊತೆ ವಾಗ್ವಾದ ನಡೆಸಿದರು.  ಕರೋನ ಲಾಕ್’ಡೌನ್ ಆರಂಭವಾದಾಗಿನಿಂದ ಊಟಕ್ಕೆ ಪರದಾಡುತ್ತಿದ್ದೇವೆ. ಈವರೆಗೂ ಯಾರೊಬ್ಬರು ತಮಗೆ ಆಹಾರದ ಸಾಮಾಗ್ರಿ ಕೊಟ್ಟಿಲ್ಲ. ಕೋರನ ಸಂದರ್ಭ ಸರ್ಕಾರ ಘೋಷಿಸಿದ ಯಾವುದೇ ಸೌಕರ್ಯವು ತಮಗೆ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ರಸ್ತೆ ತಡೆ ನಡೆಸಿದರು. ತಮಗೆ ಆಹಾರ ಸಿಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಬಳ್ಳೆಕೆರೆ ಸಂತೋಷ್ ಅವರು ಸ್ಥಳೀಯರನ್ನು ಸಮಾಧಾನಪಡಿಸಲು ಯತ್ನಿಸಿದರು. ಇನ್ನು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು...

ಲಾಕ್ ಡೌನ್ ನಡುವೆಯೂ 70 ಜನ ನಮಾಜ್ 7ಮಂದಿಗೆ ಜ್ವರ

Image
ಆಯನೂರು ಸಮೀಪ 70ಕ್ಕೂ ಹೆಚ್ಚು ಮಂದಿಯಿಂದ ನಮಾಜ್, ಏಳು ಮಂದಿಗೆ ಜ್ವರದ ಲಕ್ಷಣ, ಎಲ್ಲರಿಗೂ ಲಾಕ್’ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ನಮಾಜ್ ಮಾಡುತ್ತಿದ್ದ 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್’ನಲ್ಲಿ ಇರಿಸಿದ್ದಾರೆ. ನಮಾಜ್’ನಲ್ಲಿ ಭಾಗಿಯಾದವರ ಪೈಕಿ ಏಳು ಮಂದಿಯಲ್ಲಿ ಜ್ವರದ ಲಕ್ಷಣ ಇರುವುದು ಬೆಳಕಿಗೆ ಬಂದಿದೆ. ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರದ ನಮಾಜ್ ಮಾಡಲು 70ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಅಂತಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಡಾಕ್ಟರ್ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಲಾಕ್ ಮಾಡಿದರು. ಕೂಡಲೇ ವೈದ್ಯರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಏಳು ಮಂದಿಗೆ ಜ್ವರದ ಲಕ್ಷಣ ಇರುವುದು ಪತ್ತೆಯಾಗಿದೆ. ಎಲ್ಲರೂ ಕ್ವಾರಂಟೈನ್ ವಿಭಾಗಕ್ಕೆ ಏಳು ಮಂದಿಯನ್ನು ಕೂಡಲೆ ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಉಳಿದ 70 ಮಂದಿಯನ್ನು ಸಮೀಪದ ಶಾಲೆಯೊಂದರ ಕಟ್ಟಡದಲ್ಲಿ ಕ್ವಾರಂಟೈನ್ ವಿಭಾಗದಲ್ಲಿ ಇರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕುಂಸಿ ಠಾಣೆ ಸಬ್ ಇನ್ಸ್’ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಸಂಪಾದಕಿ ಮಂಜುನಾಥ್

ದೀಪಾರಾಧನೆ ಒಂದೇ ಪರಿಹಾರ

Image
ದ್ವಾದಶೀ ಅರ್ಕವಾಸರೇ ದಗ್ಧ ಯೋಗಃ-ಭಾನುವಾರ ದುರಂತ ಸೂಚಕ ದಿನ, ದೀಪಾರಾಧನೆ ಒಂದೇ ಪರಿಹಾರ ಪ್ರಧಾನಿಯವರು ಹೇಳಿರುವಂತೆ ದೀಪ ಪ್ರಜ್ವಲಿಸುವುದು ಈಗಿನ ಪರಿಸ್ಥಿತಿಯಲ್ಲಿ 7 SHARES ದೀಪಾರಾಧನೆಯಿಂದ ಕ್ಷೇಮವೂ ಆಗುತ ಹಿಂದೆ ನರಕಾಸುರ ವಧೆಯು ಅಶ್ವಯುಜ ಮಾಸದ ಕೃಷ್ಣ ಚತುರ್ದಶಿಯಂದು ನಡೆಯಿತು. ಅಲ್ಲಿಯವರೆಗೆ ಹಿಂದಿನಿಂದ ನಡೆಯುತ್ತಿದ್ದ ತೈಲಾಭ್ಯಾಂಗ ಸ್ನಾನವು ಅಂದಿನಿಂದ ನರಕ ಚತುರ್ದಶಿಯಾಯ್ತು. ಅಂದರೆ ನರಕಾಸುರನ ಬಾಧೆ ತೊಲಗಲು ಅದೆಷ್ಟೋ ಚತುರ್ದಶಿ ತೈಲಾಭ್ಯಾಂಗ(ಯಮಬಾಧೆ ನಿವಾರಣೆಗಾಗಿ) ಆಗಿರಬಹುದು. ಅದೇ ರೀತಿ ಲೋಕ ಕಂಠಕರನ್ನು, ಕಂಠಕಗಳನ್ನು ಹೊರದಬ್ಬಲು ನಾಶ ಮಾಡಲು ಕೆಲವೊಂದು ವಿಧಾನಗಳ ವೃತಗಳು ಭಾರತೀಯ ಸಂಪ್ರದಾಯದಲ್ಲಿ ನಡೆದುಕೊಂಡು ಬಂದಿದೆ. ಅಂತಹದ್ದರಲ್ಲಿ ದೀಪಜ್ಯೋತಿ ಬೆಳಗುವುದೂ ಒಂದಾಗಿದೆ. ದೀಪದ ಗುಣವೇ ಹಾಗೆ. ‘‘ದೀಪಂ ಹರತೇ ಪಾಪಾನಿ’’ ಎಂದಿದೆ ಶಾಸ್ತ್ರ ವಚನ. ದೀಪ ಬೆಳಗಿದರೆ ಕತ್ತಲು ಹೋಗುತ್ತಾ ಎಂದು ಕೇಳುವವರು ಮೂರ್ಖರು. ಎಪ್ರಿಲ್ 5ನೇ ತಾರೀಕು, ರಾತ್ರಿ 9.09 ನಿಮಿಷಕ್ಕೆ ಈ ದೇಶದ ಪ್ರಧಾನಿ ದೇಶದ ಪ್ರಜೆಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇದು ಸರಕಾರಿ ಆದೇಶವೇನಲ್ಲ. ವಿನಮ್ರ ವಿನಂತಿ. ಸಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರನ್ನು ಓಡಿಸಲು ಇಂತಹ ಅನೇಕ ಸಾಮೂಹಿಕ ಕ್ರಿಯೆಗಳಾಗಿತ್ತು. ಇದನ್ನು people movement ಎಂದು ವ್ಯಾಖ್ಯಾನಿಸಬಹುದು. ಗಂಟೆ ಗಟ್ಟಳೆ ಇದ...

ತಾಲೂಕು ವರದಿಗಾರರು ಬೇಕಾಗಿದ್ದಾರೆ

                                  ತಾಲೂಕು ವರದಿಗಾರರು ಬೇಕಾಗಿದ್ದರೆ ನಮ್ಮ ಮಹಾಪಾಪಿ ಪತ್ರಿಕೆಗೆ ಶಿವಮೊಗ್ಗ ಜಿಲ್ಲೆಯ ಈ ಕೆಳಗಿನ ತಾಲ್ಲೂಕುಗಳಿಗೆ .ತಾಲ್ಲೂಕು ವರದಿಗಾರರು ಬೇಕಾಗಿದ್ದರೆ ಭದ್ರಾವತಿ ಶಿವಮೊಗ್ಗ ಶಿಕಾರಿಪುರ ಸಾಗರ ಸೊರಬ ಹೊಸನಗರ ತೀರ್ಥಹಳ್ಳಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ಮತ್ತು ಕನ್ನಡ ಬರೆಯಲು ಓದಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೆಳಗಿನ  ಇ .ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ವಿವರವನ್ನು ೭ದಿನಗಳ ಒಳಗಾಗಿ ಕಳಿಹಿಸ ತಕ್ಕದು  ತಕ್ಕದ್ದು ವಾಟ್ಸಪ್ ಮುಖಾಂತರ ಕಳಿಸಬಹುದು Pshwetha9@gmail.com 7022188642 ಸೂಚನೆ : ಆಯ್ಕೆಯಾದ ಅಭ್ಯರ್ಥಿಗಳಿಗೆ ನಮ್ಮಲ್ಲಿಯೇ ತರಬೇತಿ ನೀಡಿ ಅವರಿಗೆ ತರಬೇತಿ ಪ್ರಮಾಣ ಪತ್ರವನ್ನು ನೀಡಲಾಗುವುದು ನಮ್ಮ ಪತ್ರಿಕೆಯ ಕಡೆಯಿಂದ ಗುರುತಿನ ಚೀಟಿಯನ್ನು ಕೂಡ ನೀಡಲಾಗುವುದು

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಈಸೂರು ಗ್ರಾಮದಲ್ಲಿ ಕೊರೋನ ಜನಜಾಗೃತಿ

Image
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಕೊರೋನ ವೈರಸ್‌ ಬಗ್ಗೆ  ಮುಂಜಾಗ್ರತಾ ಕ್ರಮಗಳನ್ನು ಹಾಡಿನ ಮೂಲಕ ಜನರಿಗೆ ಮನಮುಟ್ಟುವ ರೀತಿಯಲ್ಲಿ  . ಗ್ರಾಮ ಪಂಚಾಯತಿ ಸದಸ್ಯರು. ಕೆ ಇ ಬಿ ವರ್ಕರ್ ಹಾಗು ಆಶಾ ಕಾರ್ಯಕರ್ತರು ಜನರಿಗೆ ತಿಳಿಸಿದ್ದಾರೆ     ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಸಂಪಾದಕಿ        ಶ್ವೇತಾ ಮಂಜುನಾಥ

ಕೊರೋನ ಲಾಕ್ ಡೌನ್ ಮತ್ತು ಸೆಕ್ಷನ್ 144 ಜಾರಿಯಲ್ಲಿದ್ದರೂ ತಿಥಿ ಕಾರ್ಯ ಶಿವಮೊಗ್ಗದಲ್ಲಿ

Image
ಕೊರೋನ ಲಾಕ್ ಡೌನ್ ಮತ್ತು ಸೆಕ್ಷನ್144  ಜಾರಿಯಲ್ಲಿದ್ದರೂ ತುಂಗಾ ನದಿ ದಂಡೆಯ ಮೇಲೆ ತಿಥಿ ಕಾರ್ಯ ನಡೆದಿದೆ ಇದರಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಕಾರ್ಪಲಾಯ್ಯ ಛತ್ರ ಮಂಟಪದಲ್ಲಿ ತಿಥಿ ಕಾರ್ಯ ನೆಡದಿದೆ. ಅಶೋಕ ನಗರ. ಹನುಮಂತನಗರ. ವಿನೋಬನಗರದ ಜನರು ಭಾಗವಹಿಸಿದ್ದಾರೆ  ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಸ್ಥಳೀಯ ಕಾರ್ಪೋರೇಟರುಗಳು ಸ್ಥಳಕ್ಕೆ ಆಗಮಿಸಿದ್ದರು ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಜನರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಸಂಪಾದಕಿ ಶ್ವೇತಾ ಮಂಜುನಾಥ್