ಲಾಕ್ ಡೌನ್ ನಡುವೆಯೂ 70 ಜನ ನಮಾಜ್ 7ಮಂದಿಗೆ ಜ್ವರ









ಆಯನೂರು ಸಮೀಪ 70ಕ್ಕೂ ಹೆಚ್ಚು ಮಂದಿಯಿಂದ ನಮಾಜ್, ಏಳು ಮಂದಿಗೆ ಜ್ವರದ ಲಕ್ಷಣ, ಎಲ್ಲರಿಗೂ
ಲಾಕ್’ಡೌನ್ ಮತ್ತು ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ನಮಾಜ್ ಮಾಡುತ್ತಿದ್ದ 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್’ನಲ್ಲಿ ಇರಿಸಿದ್ದಾರೆ. ನಮಾಜ್’ನಲ್ಲಿ ಭಾಗಿಯಾದವರ ಪೈಕಿ ಏಳು ಮಂದಿಯಲ್ಲಿ ಜ್ವರದ ಲಕ್ಷಣ ಇರುವುದು ಬೆಳಕಿಗೆ ಬಂದಿದೆ.

ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರದ ನಮಾಜ್ ಮಾಡಲು 70ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಅಂತಾ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.








ಸ್ಥಳಕ್ಕೆ ದೌಡಾಯಿಸಿದ ಡಾಕ್ಟರ್

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಲಾಕ್ ಮಾಡಿದರು. ಕೂಡಲೇ ವೈದ್ಯರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಏಳು ಮಂದಿಗೆ ಜ್ವರದ ಲಕ್ಷಣ ಇರುವುದು ಪತ್ತೆಯಾಗಿದೆ.

ಎಲ್ಲರೂ ಕ್ವಾರಂಟೈನ್ ವಿಭಾಗಕ್ಕೆ
ಏಳು ಮಂದಿಯನ್ನು ಕೂಡಲೆ ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಉಳಿದ 70 ಮಂದಿಯನ್ನು ಸಮೀಪದ ಶಾಲೆಯೊಂದರ ಕಟ್ಟಡದಲ್ಲಿ ಕ್ವಾರಂಟೈನ್ ವಿಭಾಗದಲ್ಲಿ ಇರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕುಂಸಿ ಠಾಣೆ ಸಬ್ ಇನ್ಸ್’ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು


ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಸಂಪಾದಕಿ
ಮಂಜುನಾಥ್


Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು