ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ


ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ
ಸಂಪರ್ಕಿಸಲು ಕೋರಿಕೆ

ಶಿವಮೊಗ್ಗ, ಎಪ್ರಿಲ್-05(ಕರ್ನಾಟಕ ವಾರ್ತೆ): ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಒಂದೇ ಬಾರಿಗೆ ವಿತರಣೆ ಮಾಡಲಾಗುತ್ತಿದ್ದು, ಈ ಕುರಿತು ಯಾವುದೇ ದೂರುಗಳಿದ್ದರೆ ಗ್ರಾಹಕರು ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಿ ದೂರುಗಳನ್ನು ದಾಖಲಿಸಬಹುದು ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ 10ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡಿಗೆ ಎರಡು ತಿಂಗಳ ಅವಧಿಯ 4ಕೆಜಿ ಗೋಧಿಯನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಕಾರ್ಡುದಾರರಿಗೆ ಒಟ್ಟು ಪ್ರತಿ ಕಾರ್ಡಿಗೆ 70 ಕೆಜಿ ಅಕ್ಕಿ ನೀಡಲಾಗುತ್ತಿದೆ. ಎಪಿಎಲ್ ಏಕಸದಸ್ಯ ಕಾರ್ಡಿಗೆ 10ಕೆಜಿ ಅಕ್ಕಿ, 2ಹಾಗೂ ಹೆಚ್ಚಿನ ಸದಸ್ಯರಿರುವ ಕಾರ್ಡಿಗೆ 20 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದೂರು ದಾಖಲಿಸಿ: ತೂಕದಲ್ಲಿ ಮೋಸ, ಅಸಮರ್ಪಕ ಸೇವೆ ಸೇರಿದಂತೆ ಯಾವುದೇ ಕುರಿತು ದೂರುಗಳಿದ್ದರೆ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.
ಶಿವಮೊಗ್ಗ ನಗರ: 82176-93001 (ಸಹಾಯಕ ನಿರ್ದೇಶಕರು), 86186-46252(ಆಹಾರ ನಿರೀಕ್ಷಕರು),
ಭದ್ರಾವತಿ ನಗರ: 94487-41918, 97430-56548, 
ಶಿವಮೊಗ್ಗ ತಾಲೂಕು: 82778-63559 , 96869-32678, 
ಭದ್ರಾವತಿ ತಾಲೂಕು: 94487-41918 , 79755-95292,
ಸಾಗರ ತಾಲೂಕು: 94485-84727 , 94488-83279,
  ಶಿಕಾರಿಪುರ ತಾಲೂಕು: 97436-32240. 94819-85444,
ಸೊರಬ:94805-45472 , 98867-70737,
 ತೀರ್ಥಹಳ್ಳಿ 99012-38300, 90081-38995 ಮತ್ತು
ಹೊಸನಗರ: 99866-24119, 95359-34858
ಸಂಪರ್ಕಿಸುವಂತೆ ಅವರು ಮನವಿ ಮಾಡಿದ್ದಾರೆ.
 ಶಿವಮೊಗ್ಗ ಜಿಲ್ಲೆ  ಸಹ ಸಂಪಾದಕ
ಮಂಜುನಾಥ್ 

Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು