ಪೋಲಿಸರು ಭೇದಿಸಿದ ,ಅಂಬ್ಯೂಲೆನ್ಸ ರಹಸ್ಯ
*ಸೆಕ್ಷನ್ 144Crpc ನಿಯಮ ಉಲ್ಲಂಘನೆ ಮಾಡಿ ಅಂಬ್ಯೂಲೆನ್ಸ್ ನಲ್ಲಿ ಬೆಂಗಳೂರಿನಿಂದ ಪ್ರಯಾಣಿಕರನ್ನು ಶಿವಮೊಗ್ಗದ ಕಡೇಕಲ್ ಗ್ರಾಮಕ್ಕೆ ಕರೆತಂದ ವ್ಯಕ್ತಿಯ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ*
ದೇಶಾದ್ಯಂತ Covid-19 ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ *ಭಾರತ ದೇಶಾದ್ಯಂತ ಲಾಕ್ ಡೌನ್* ಘೋಷಣೆಯಾಗಿದ್ದು ಹಾಗೂ *ಶಿವಮೊಗ್ಗ ಜಿಲ್ಲಾಧಿಕಾರಿಗಳು ಸೆಕ್ಷನ್ 144 Crpc ಯನ್ನು* ಜಾರಿ ಮಾಡಿ ಆದೇಶ ಹೊರಡಿಸಿದ್ದು, ಹೊರ ಜಿಲ್ಲೆಯಿಂದ ಸಾರ್ವಜನಿಕರನ್ನು ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಮಾಡಲು ನಿರ್ಭಂದ ವಿಧಿಸಿದ್ದರೂ ಸಹಾ ದಿಃ-25.03.2020 ರಂದು ನಂಬರ್ KA-14 B-1680 ಆಂಬ್ಯೂಲೆನ್ಸ್ ಚಾಲಕನಾದ *ಸಯ್ಯದ್ ಖಾಸಿಂ ಬಿನ್ ಸೈಯದ್ ಅಕ್ಬರ್ ವಾಸ ಅನ್ವರ್ ಕಾಲೋನಿ ಭದ್ರಾವತಿ* ಈತನು ತನ್ನ ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನಿಂದ ಶಿವಮೊಗ್ಗದ ಕಡೇಕಲ್ ಗ್ರಾಮದ ವಾಸಿಗಳಾದ 05 ಜನರನ್ನು ಸ್ವ ಗ್ರಾಮಕ್ಕೆ ಕರೆತಂದು ಬಿಟ್ಟಿರುತ್ತಾನೆ.
ಮಾರಣಾಂತಿಕವಾದ Covid-19 ವೈರಾಣುವು ಇತರರಿಗೂ ಸಹಾ ಹರಡುವ ಸಾದ್ಯತೆಗಳಿದ್ದರೂ ಲಾಕ್ ಡೌನ್ ಹಾಗೂ ಸೆಕ್ಷನ್ 144Crpc ನಿಯಮವನ್ನು ಉಲ್ಲಂಘನೆ ಮಾಡಿ ಅಂಬ್ಯೂಲೆನ್ಸ್ ನಲ್ಲಿ ಬೆಂಗಳೂರಿನಿಂದ 05 ಜನ ಪ್ರಯಾಣಿಕರನ್ನು ಶಿವಮೊಗ್ಗದ ಕಡೇಕಲ್ ಗ್ರಾಮಕ್ಕೆ ಕರೆತಂದ ಆಂಬ್ಯೂಲೆನ್ಸ್ ಚಾಲಕನಾದ ಸಯ್ಯದ್ ಖಾಸಿಂನ ವಿರುದ್ಧ ತುಂಗಾನಗರ ಪೊಲೀಸ್ .ಠಾಣೆಯಲ್ಲಿ ಗುನ್ನೆ ನಂ 139/2020 ಕಲಂ 188, 269 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಮುಖ್ಯ ನಿರ್ವಾಹಕಿ ಸಂಪಾದಕಿ
ಶ್ವೇತಾ ಮಂಜುನಾಥ್

Comments
Post a Comment