ವಾಟ್ಸಪ್ ಮೆಸೇಜ್ಗೆ ಸ್ಪಂದಿಸಿದ ಶಿವಮೊಗ್ಗ ಪೊಲೀಸರು



ವಾಟ್ಸಪ್‌ ಮೆಸೇಜ್‌ಗೆ ಸ್ಪಂದಿಸಿದ‍ ಶಿವಮೊಗ್ಗ ಪೊಲೀಸರು ವೃದ್ಧ ದಂಪತಿಗೆ ನೆರವು ನೀಡಿದ್ದಾರೆ. ಒಂದು ತಿಂಗಳಿಗೆ ಆಗುವಷ್ಟು ದಿನಸಿ ಮತ್ತು ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದ್ದಾರೆ.
ಶಿವಮೊಗ್ಗ ಮಲವಗೊಪ್ಪದ ಶುಗರ್‌ ಫ್ಯಾಕ್ಟರಿ ಕ್ವಾರ್ಟರ್ಸ್‌ನಲ್ಲಿ ದಂಪತಿ ವಾಸವಾಗಿದ್ದಾರೆ. ಸಂಬಂಧಿಯೊಬ್ಬರು ತೀರಿಕೊಂಡಿರುವ ಹಿನ್ನೆಲೆ, ಕುಟುಂಬದವರು ತಮಿಳುನಾಡಿಗೆ ಹೋಗಿದ್ದು, ಲಾಕ್‌ಡೌನ್‌ ಹಿನ್ನೆಲೆ ಹಿಂತಿರುಗಲು ಆಗಿಲ್ಲ. ಇತ್ತ ವೃದ್ಧ ದಂಪತಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಾದ್ಯವಾಗಿಲ್ಲ.

ವಾಟ್ಸಪ್‌ ಮೆಸೇಜ್‌ಗೆ ಸ್ಪಂದಿಸಿದ ಪೊಲೀಸ್  .....
ವೃದ್ಧ ದಂಪತಿ ಪರಿಸ್ಥಿತಿ ಕುರಿತು ವಾಟ್ಸಪ್‌ನಲ್ಲಿ ಮೆಸೇಜ್‌ ಬಂದಿತ್ತು. ಇದನ್ನು ಗಮನಿಸಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ವೃದ್ಧ ದಂಪತಿಗೆ ನೆರವು ನೀಡುವಂತೆ ಸೂಚಿಸಿದ್ದರು. ಅದರಂತೆ ದಂಪತಿ ಮನೆಗೆ ತೆರಳಿದ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್‌ಐ ಸುರೇಶ್‌ ಮತ್ತು ಸಿಬ್ಬಂದಿ ಒಂದು ತಿಂಗಳಿಗೆ ಆಗುವಷ್ಟು ದಿನಸಿ ನೀಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ                                                      ಶಿವಮೊಗ್ಗ ಜಿಲ್ಲಾ ಸಹ ಸಂಪಾದಕ                                                                                                     ಮಂಜುನಾಥ್ 

Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು