ಮೆಗನ್ ಹೋದರೇನಂತೆ ಭರ್ಜರಿಯಾಗಿ ಸಿದ್ಧಗೊಂಡಿದೆ ಏಂಜಲ್ಸ್ ಹಾಗೂ ಸರ್ಜಿ ಆಸ್ಪತ್ರೆ ಗಳು
ಮೆಗ್ಗಾನ್ ನಲ್ಲಿ ನಿನ್ನೆ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅನಾಹುತಕ್ಕೆ ಜಿಲ್ಲಾಡಳಿತ ಹೆರಿಗೆ ವ್ಯವಸ್ಥೆಯನ್ನ ಬೇರೆಡೆ ಮಾಡಿದೆ. ಸಾಮಾನ್ಯ ಹೆರಿಗೆ ಮಾತ್ರ ಮೆಗ್ಗಾನ್ ನಲ್ಲಿ ನೋಡಲಾಗುತ್ತಿದ್ದು, ಸಾಮಾನ್ಯವಲ್ಲದ ಹೆರಿಗೆ ಪ್ರಕರಣಗಳನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತಿದೆ. ಅದರಂತೆ ಎರಡು ಖಾಸಗಿ ಆಸ್ಪತ್ರೆಗಳನ್ನ ಜಿಲ್ಲಾಡಳಿತ ಗುರುತಿಸಿದೆ.
ಮೆಗ್ಗಾನ್ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ನಿನ್ನೆ ಶಾರ್ಟ್ ಸೆರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಟ್ಟುಹೋಗಿದೆ, ಮೆಗ್ಗಾನ್ ಬೆಂಕಿಗೆ ಆಹುತಿ ಆದರೆ ಏನಂತೆ ಖಾಸಗಿ ಆಸ್ಪತ್ರೆಗಳ ವೈದ್ಯರ ತಂಡ ಮಕ್ಕಳನ್ನ ಹಾಗೂ ತಾಯಿಯಂದರನ್ನ ರಕ್ಷಿಸಲು ಅಲ್ಲಿನ ವೈದ್ಯರು ಯುದ್ಧದ ರೀತಿಯಲ್ಲಿ ಸನ್ನದ್ಧರಾಗಿದ್ದಾರೆ. ಮೆಗ್ಗಾನ್ ಗೆ ಬರುವ ಮಹಿಳೆಯರಿಗೆ ಹೆರಿಗೆಯಲ್ಲಿ ತೊಂದರೆ ಕಂಡುಬಂದರೆ ಮ್ಯಾಕ್ಸ್ ಏಂಜಲ್ ಹಾಗೂ ಸರ್ಜಿ, ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಮ್ಯಾಕ್ಸ್ ಏಂಜಲ್ ನಲ್ಲಿ ಡಾ.ನಾಗೇಂದ್ರರವರ ನೇತೃತ್ವದಲ್ಲಿ ತಂಡ ಸಿದ್ದಗೊಂಡಿದೆ
ಡಾ.ನಾಗೇಂದ್ರರವರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಮ್ಯಾಕ್ಸ್ ಏಂಜಲ್ ಆಸ್ಪತ್ರೆಯಲ್ಲಿ ಮೆಗ್ಗಾನ್ ಗೆ ಬಂದ ಎರಡು ಹೊಸ ಹೆರಿಗೆ ಪ್ರಕರಣವನ್ನ ಇಂದು ಅಡ್ಮಿಟ್ ಮಾಡಿಕೊಳ್ಳಲಾಗಿದೆ. ತರೀಕೆರೆ ನಿವಾಸಿ ಶಬನಾ ಹಾಗೂ ಭದ್ರಾವತಿ ನಿವಾಸಿ ಸಾನಿಯಾ ಫೈರೋಜ್ ರವರನ್ನ ದಾಖಲಿಸಿಕೊಳ್ಳಲಾಗಿದೆ. ಆರೋಗ್ಯದಲ್ಲಿ ಏರುಪೇರು ಕಂಡಿದ್ದ ಈ ಎರಡೂ ಪ್ರಕರಣವನ್ನ ಜಿಲ್ಲಾಡಳಿತವೂ ಊಹಿಸಲಾಗದ ರೀತಿಯಲ್ಲಿ ಚಿಕಿತ್ಸೆ ನೀಡುವ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನ ಕಾಪಾಡಿಕೊಳ್ಳಲಾಗುತ್ತಿದೆ. ಮತ್ತೆ ಬರುವ ಹೊಸ ಪ್ರಕರಣಗಳಿಗೆ ಡಾ.ನಾಗೇಂದ್ರ ಮತ್ತು ಅವರ ವೈದ್ಯರ ಮತ್ತು ನರ್ಸ್ ಗಳನ್ನೊಳಗೊಂಡ ತಂಡ ಸನ್ನದ್ಧಗೊಂಡಿದೆ.
ಡಾ. ನಾಗೇಂದ್ರ ರವರ ಜೊತೆ ಡಾ.ಅನಿತಾ ಹೆಗಡೆ, ಡಾ. ಗೀತಾ ರವಿ, ಡಾ.ರವೀಂದ್ರ ಜಿ.ಎಲ್. ಡಾ. ನಿತಿನ್ ಎಸ್ ಶಾಗಲೆ, ಹಾಗೂ 30 ಕ್ಕೂ ಹೆಚ್ಚು ನರ್ಸ್ ನ್ನ ಮೆಗ್ಗಾನ್ ನಿಂದ ಬರುವ ಹೊಸ ಹೆರಿಗೆ ಪ್ರಕರಣವನ್ನ ನಿಭಾಯಿಸಲು ತಂಡವೊಂದನ್ನ ಸನ್ನದ್ಧಗೊಳಿಸಲಾಗಿದೆ.
ಸರ್ಜಿ ಆಸ್ಪತ್ರೆಯಲ್ಲೂ ನಡೆಯುತ್ತಿದೆ ಯುದ್ಧದ ರೀತಿಯ ತಯಾರಿ-ಹ್ಯಾಟ್ಸ್ ಆಫ್ ಟು ಡಾ.ಧನಂಜಯ್ ಸರ್ಜಿ
ಮೆಗ್ಗಾನ್ ನಲ್ಲಿ ನಿಶ್ಚಿಂತೆಯಲ್ಲಿ ಮಲಗಿದ್ದ 27 ಮಕ್ಕಳು ಹೆಚ್ಚು ಕಮ್ಮಿಯಾಗಿದ್ದರೆ ಬೂದಿಯಾಗಿ ಬಿಡುತ್ತಿದ್ದವು. ಇದನ್ನ ನಾವು ಹೇಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿಕೊಂಡಿದ್ದಾರೆ. ಆದರೆ ಈ ಮಕ್ಕಳನ್ನ ಉಳಿಸಲು ಯುದ್ಧದ ರೀತಿಯಲ್ಲಿ ಸೇವೆ ಸಲ್ಲಿಸಿದ್ದು ಮಾತ್ರ ಡಾ.ಧನಂಜಯ ಸರ್ಜಿ,
ಆಸ್ಪತ್ರೆಯಲ್ಲಿಯೇ ಇರುವ ಪೇಷಂಟ್ ಗಳನ್ನ ಉಳಿಸಿಕೊಳ್ಳುವ ಜೊತೆಯಲ್ಲಿ ಮೆಗ್ಗಾನ್ ನಿಂದ ಬಂದ ಒಂದು ತಿಂಗಳ ಮಕ್ಕಳಿಗೆ ಸೋಂಕು ತಗಲದಂತೆ ನೋಡಿಕೊಳ್ಳುವ ಕೆಲಸವನ್ನ ಸರ್ಜಿ ಆಸ್ಪತ್ರೆ ಬಹಳ ಯಶಸ್ವಿಯಾಗಿ ನೋಡಿಕೊಂಡಿದೆ. ಜಿಲ್ಲಾಡಳಿತ ಹೇಳುವ ಮೊದಲೆ ಫಟಾಫಟ್ ಅಂತ ಸಿದ್ದ ಮಾಡಿಕೊಳ್ಳುವಲ್ಲಿ ಸರ್ಜಿ ಆಸ್ಪತ್ರೆ ಸಿದ್ದಮಾಡಿಕೊಂಡಿದೆ.
ಮಗು ಮತ್ತು ತಾಯಿಯಂದಿರಿಗೆ ತಮ್ಮ ಸರ್ಜಿ ಆಸ್ಪತ್ರೆಯ ಕಟ್ಟಡದ ಮೇಲುಗಡೆ ಜಿಲ್ಲಾಡಳಿತದೊಂದಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಊಟದ ವ್ಯವಸ್ಥೆಯನ್ನ ಮಾಡಿ ಮಾನವೀಯತೆ ತೋರಿರುವುದು ಹೆಮ್ಮೆಯ ಕೆಲಸವೇ ಸರಿ. ಸರ್ಜಿ ಆಸ್ಪತ್ರೆಯಲ್ಲಿ ಬೇಕಾಗಿರುವ ಎಕ್ಸ್ ಟ್ರಾ ಎಕ್ಯೂಪ್ ಮೆಂಟ್ ನ್ನ ಮೆಟ್ರೂ ಮತ್ತು ಯೂನಿಟಿ ಹಾಸ್ಪಿಟಲ್ ನಿಂದ ಪೂರೈಸಲಾಗಿದೆ. 10 ಜನ ವೈದ್ಯರು ಡಾ.ಧನಂಜಯ್ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ 40 ಜನ ನರ್ಸ್ ಗಳನ್ನ ನಿಯೋಜಿಸಲಾಗಿದೆ.
ತನಿಖೆಗೆ ಆಗ್ರಹಿಸಿದ ಕೆ.ಈ.ಕಾಂತೇಶ್
ಮೆಗ್ಗಾನ್ ನಲ್ಲಿ ಹೇಳಿರುವಂತೆ ಹೆಚ್ಚು ಕಡಿಮೆ ಆಗಿದ್ದರೆ ಹಸುಕಂದಮ್ಮಗಳೆಲ್ಲಾ ಬೆಂಕಿಗೆ ಆಹುತಿ ಆಗಿಬಿಡುತ್ತಿದ್ದವು. ಸಿಡಿಲಿನ ಹೊಡೆತಕ್ಕೆ ಈ ಅವಘಡ ನಡೆದಿದೆ ಎಂದು ಮೇಲ್ನೋಟಕ್ಕೆ ಕಾಣುವ ಕಾರಣವಾಗಿದೆ. ಆದರೆ ಅಲ್ಲಿನ ಹೆಚ್ ಒಡಿಗಳು ನೀಡಿರುವ ವರದಿ, ಇತರರು ಹೇಳಿರುವ ರೀತಿಯಲ್ಲಿ ನೋಡಿದರೆ ಸಿಮ್ಸ್ ನ ನಿರ್ಲಕ್ಷತನ ಹೆಚ್ಚಾಗಿ ಕಂಡುಬರುತ್ತಿದೆ.
ಈ ನಿರ್ಲಕ್ಷತನಕ್ಕೆ ಹೊಣೆಯಾರು? ಸಚಿವ ಈಶ್ವರಪ್ಪನವರೇ ಹೇಳಿದಂತೆ ಸ್ವಲ್ಪ ಹೆಚ್ಚುಕಮ್ಮಿಯಾಗಿದ್ದರೆ ಇದು ಅಂತರಾಷ್ಟ್ರೀಯ ಸುದ್ದಿಯಾಗಿಬಿಡುತ್ತಿತ್ತು. ಹೀಗಾಗಿ ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಈ.ಕಾಂತೇಶ್ ತನಿಖೆಗೆ ಒತ್ತಾಯಿಸಿದ್ದಾರೆ. ನಾಡಿದ್ದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಮೆಗ್ಗಾನ್ ಅವಘಡ ಕುರಿತು ತನಿಖೆ ಆಗಬೇಕೆಂಬ ಆಗ್ರಹ ಮಾಡಲಾಗುವುದು ಎಂದರು
ಕಾಂತೇಶ್
ಶಿವಮೊಗ್ಗ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಮತ್ತು ಸಂಪಾದಕಿ
ಶ್ವೇತಾ ಮಂಜುನಾಥ್







Comments
Post a Comment