ಅಮಾನತು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ



ಅಮಾನತು ವಾಪಾಸ್ ಪಡೆಯದಿದ್ದರೆ ಉಗ್ರ ಹೋರಾಟ!

ಕೊರೋನ ವಾರಿಯರ್ಸ್ ರನ್ನ  ವಜಾಗೊಳಿಸಿದ ಬೆನ್ನಲ್ಲೆ ಶುಶ್ರೂಷ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿ ಸಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪನವರನ್ನ ಭೇಟಿ ಮಾಡಿ ಅಮಾನತು ವಾಪಾಸ್ ಪಡೆದುಕೊಳ್ಳುವಂತೆ ಮನವಿ ಸಲ್ಲಿಸಿತು.

ಕೊರೋನ ವಾರಿಯರ್ಸ್ ಗಳಾದ ಖಾಯಂ ನೌಕರರಾದ ಚೇತನಾ ಕುಮಾರಿ, ಹೊರಗುತ್ತಿಗೆ ನೌಕರರಾದ ಭುವನೇಶ್ವರಿ, ಪದ್ಮರಾಜ್, ಅರುಣ್ ಕುಮಾರ್ ಲಕ್ಷ್ಮೀ ದೇವಿ, ಅನಿತಾರವರನ್ನ ಅಮಾನತು ಗೊಳಿಸಲಾಗಿತ್ತು.

ಇಂದು ಬೆಳಿಗ್ಗೆ ಅಮಾನತುಗೊಳಿಸಲಾಗಿದ್ದು ಸಂಜೆಯಷ್ಟು ಹೊತ್ತಿಗೆ ಶುಶ್ರೂಷ ಸಂಘ ಅಮಾನತುಗೊಳಿಸಿದನ್ನ ವಿರೋಧಿಸಿ ಸಿಮ್ಸ್ ನಿರ್ದೇಶಕರನ್ನ ಮನವಿ ಸಲ್ಲಿಸಿದೆ. ಈ ಕುರಿತು ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ, ಈ ಅಮಾನತು ಸರಿಯಲ್ಲ, ವಾಪಾಸ್ ಪಡೆಯಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋ ಕೆಲಸದ ಒತ್ತಡದಿಂದ ಆಗಿರಬಹುದು ಎಂದು ಹೇಳಿದರು.

ಕೊರೋನ ವಿರುದ್ಧ ಬಂದ ಮೊದಲ ಪ್ರಕರಣ ಇದು ಆಗಿದ್ದರಿಂದ ಗೌನು, ಮಾಸ್ಕ್ ಮೊದಲಾದ ಎಕ್ಯುಪ್ ಮೆಂಟ್ ಗಳನ್ನ ಹೊತ್ತು ಸತತ 6 ಗಂಟೆಯ ವರೆಗೆ ರೋಗಿಗಳನ್ನ ನೋಡಿಕೊಳ್ಳಬೇಕು ಇದು ಅವರಲ್ಲಿ ಕಿರಿಕಿರಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಅಚಾತುರ್ಯವಾಗಿರಬಹುದು. ಇದಕ್ಕೆ ಅಮಾನತು ಶಿಕ್ಷೆ ನೀಡುವುದು ಸರಿಯಲ್ಲವೆಂದರು.. 

ನಂತರ ಮಾತನಾಡಿದ ಶುಶ್ರೂಷಕಿ ಗಾಯಿತ್ರಿದೇವಿ ಅಮಾನತು ವಾಪಾಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಲಿದ್ದೇವೆ ಎಂದರು
ಶಿವಮೊಗ್ಗ ಜಿಲ್ಲಾ 
ಸಹಸಂಪಾದಕರು 
ಮಂಜುನಾಥ್

Comments

Popular posts from this blog

ತೀರ್ಥಹಳ್ಳಿ ,ಸಾಗರ ತಾಲ್ಲೂಕಿನ ವಿವಿಧೆಡೆಕರೋನಾ ಭಯ ಗಿಂತಲೂ ಮಂಗನ ಕಾಯಿಲೆ ಭಯ ಹೆಚ್ಚಾಗಿದೆ ,ಕಾರಣವೇನು ಗೊತ್ತಾ ?

ನ್ಯಾಯಬೆಲೆ ಅಂಗಡಿ ವಿತರಣೆ ದೂರುಗಳಿದ್ದರೆ ಸಂಪರ್ಕಿಸಲು ಕೋರಿಕೆ

ಮಹಾರಾಷ್ಟ್ರದಿಂದ ಜನ 49 ಬಂದವರು ಮೆಗ್ಗನ್ ಆಸ್ಪತ್ರೆಯಲ್ಲಿ ವೈದ್ಯರು ಬಂದಿಲ್ಲ ವೆಂದು ದೂರು